ಅನೌ
ರಷ್ಯದ ತುರ್ಕಿಸ್ಥಾನದಲ್ಲಿ ಮರ್ವ್ ಓಯಸಿಸ್ಸಿನ ಬಳಿ ಇರುವ ಊರು. ಇಲ್ಲಿ ಪುರಾತನ ಸಂಸ್ಕøತಿಗಳ ಅವಶೇಷಗಳಿವೆ. ಇಲ್ಲಿನ ಮೊಟ್ಟಮೊದಲಿನ ಸಂಸ್ಕøತಿ ನವ ಶಿಲಾಯುಗಕ್ಕೆ ಸೇರಿದ್ದು. ಕಾಲಕ್ರಮೇಣ, ಇರಾನ್, ಮೆಸಪೊಟೋಮಿಯ ಸಂಸ್ಕøತಿಗಳ ಪ್ರಭಾವ ಇಲ್ಲಿ ಹರಡಿ ತಾಮ್ರದ ಉಪಯೋಗವೂ ರೂಢಿಗೆ ಬಂದಿತು. ಭೌಗೋಳಿಕವಾಗಿ ಪ್ರಾಚೀನವಿಶ್ವದ ಮೂರು ಸುಸಂಸ್ಕøತ ಪ್ರದೇಶಗಳಾಗಿದ್ದು ಪಶ್ಚಿಮ ಏಷ್ಯ, ಭಾರತ ಮತ್ತು ಚೈನಗಳ ಮಧ್ಯೆ ಆಯಕಟ್ಟಿನ ಸ್ಥಾನದಲ್ಲಿದ್ದ ಅನೌನಲ್ಲಿ ಈ ಎಲ್ಲ ಸಂಸ್ಕøತಿಗಳ ಆಂಶಿಕಸಂಗಮವನ್ನು ಗುರುತಿಸಬಹುದಾಗಿದೆ. ಹರಪ್ಪ ಮತ್ತು ಪ್ರಾಕ್-ಹರಪ್ಪ ಸಂಸ್ಕøತಿಗಳಿಗೂ ಅನೌನ ಮೂರನೆಯ ಘಟ್ಟದ ಸಂಸ್ಕøತಿಗೂ ಹಲವು ಸಾಮ್ಯಗಳು ಕಂಡುಬಂದಿವೆ.							
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ